ಅಳಿಸುವುದೇಕೆ ? ? !
“ನಗುವುದು ಸಹಜ ಧರ್ಮ ;ನಗಿಸುವುದು ಪರಧರ್ಮ ನಗುವ ಕೇಳುತ ನಗುವುದತಿಶಯದ ಧರ್ಮ ನಗುವ ನಗಿಸುವ ನಗಿಸಿ ನಗುತ ಬಾಳುವ ವರವ ಮಿಗೆ ನೀನು ಬೇಡಿಕೊಳೊ-ಮಂಕುತಿಮ್ಮ”
(ಸ್ಪೂರ್ತಿ ಕೊಟ್ಟ ಡಿ.ವಿ.ಜಿ.ಯವರ ಕವನ 🙏🏽🙏🏽🙏🏽)
ಅಳಿಸುವುದು ಅವರವರ ಧರ್ಮ
ಅಳುವುದು ನಮ ಕರ್ಮ
ಅಳುವ ಕೇಳುತ ಮತ್ತಷ್ಟು ಅಳಿಸುವುದು
ಪರರ ಮನದ ಧರ್ಮ
ನಗುತ ಅಳಿಸುವ ಅಳಿಸಿ ನಗುತ ಬಾಳುವ
ನರರಿಗೆ ತಿಳಿ ಹೇಳುವ ಕರ್ಮ ನಮಗೇತಕೇ
ನೀ ಹೇಳೋ ಬೆಪ್ಪು ಮನುಜ ! ! !
ನಗಿಸುವುದು ಅವರಿಗರಿಯದ ಧರ್ಮ
ಅಳುವ ಬದಲಿಸಿ ನಗುವುದು ನಮ ಕರ್ಮ
ನಗುವ ಕೇಳುತ ಕೆರಳಿ ಇನ್ನಷ್ಟು ಅಳಿಸುವ
ಬಗೆಯ ಅರಸುವ ಅವರ ಮರ್ಮ
ಅಳಿಸ ಹೊರಟ ಅವರ ಹೋರಾಟದಲಿ
ಅವರೇ ನರಳಿ ಅಳುವರೇ
ನೀ ಹೇಳೋ ಬೆಪ್ಪು ಮನುಜ ! ! !
ಅಳುತಾ ನಗುತಾ ಜೀವನದ ಗುದ್ದಾಟದಲಿ
ಗೆಲ್ಲುತ ಸೋಲುತ ದಿನಗಳ ಕಳೆಯುತ
ಕೊರಗುತ ನಲಿಯುತ ಮುಟ್ಟುವೆವೇ
ನರಳುತ ಸಾಯುವ ಅಂತಿಮ ಸತ್ಯವ ? ?
ನಗುನಗುತಾ ಬಾಳುತ ಪರರ ನಗಿಸುತ
ಸಂತಸವ ಸುರಿಸೋ ಸುಖೀ ಜೀವನ
ನೀ ಬೇಡಿಕೊಳೋ ಬೆಪ್ಪು ಮನುಜ ! ! ! !
ರೇಖಾ ಪ್ರಕಾಶ್